ಸಾಗರದಲ್ಲಿ ನಡೆಯುತ್ತಿದ್ದಂತ ಪ್ರತಿಭಟನೆ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ . ಸಾಗರದಲ್ಲಿ ಕೊನೆಗು ಪ್ರತಿಭಟನೆ ಕೈ ಬಿಟ್ಟ ಹಿಂದೂಪರ ಸಂಘಟನೆಗಳು. ಪರಮೇಶ್ ಮೇಸ್ತ ಅನುಮಾನಸ್ಪದ ಸಾವನ್ನು ಮುಖ್ಯಮಂತ್ರಿಗಳು ಸಿ.ಬಿ.ಐ ಗೆ ವಹಿಸಿರುವುದರಿಂದ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ಕೈ ಬಿಟ್ಟಿದೆ.ಪರಮೇಶ್ ಮೇಸ್ತ ಆತ್ಮಕ್ಕೆ ಶಾಂತಿ ಕೋರಿ ಇಲ್ಲಿನ ಅಶೋಕ ರಸ್ತೆಯಲ್ಲಿರುವ ಸತ್ಯನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಹಮ್ಮಿಕೊಂಡಿದ್ದಾರೆ.ಈ ಸಂಧರ್ಭದಲ್ಲಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಅ.ಪು ನಾರಾಯಣಪ್ಪ ಪರಮೇಶ್ ಸಾವನ್ನು ಖಂಡಿಸಿ ಮಾತನಾಡಿದರು.ನಗರದಲ್ಲಿ ಖುದ್ದು ಎಸ್ಪಿ ಅಭಿನವ್ ಖರೆ ಹಾಗೂ ಹೆಚ್ಚುವರಿ ಎಸ್ಪಿ ಮುತ್ತುರಾಜ್ ಭದ್ರತೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.ನಗರದಲ್ಲಿ ಸರ್ಕಾರಿ ಶಾಲಾ ಕಾಲೇಜುಗಳು ನಡೆಯುತ್ತಿವೆ.ವಾರದ ಸಂತೆಯನ್ನು ಮುಂದೂಡಲಾಗಿದೆ.ಒಟ್ಟಾರೆ ನಗರದಲ್ಲಿ ಟೈಟ್ ಸೆಕ್ಯೂರಿಟಿ ಹಾಕಲಾಗಿದೆ.ನಗರದ ಒಳ ಬರುವ ಪ್ರತಿಯೊಂದು ವಾಹನವನ್ನು ತಪಾಸಣೆ ನಡೆಸಲಾಗುತ್ತಿದೆ.
The Hindu organizations have finally ended the protest as our CM has handed the paramesh case to the CBI.